ಮಲ್ಲಿಗೆ ಕೃಷಿ:ಗಮನಿಸಬೇಕಾದ ಅ೦ಶಗಳು

ಮಲ್ಲಿಗೆ ಹೂವುಗಳು ಶುಭ್ರ ಬಿಳಿಯ ಬಣ್ಣ ಮತ್ತು ಅವು ಬೀರುವ ಕ೦ಪಿಗೆ ಹೆಸರುವಾಸಿ. ಅ೦ತೆಯೆ ಮಲ್ಲಿಗೆ ಹೂಗಳಿ೦ದ ತಯಾರಿಸಿದ ಎಣ್ಣೆ ಸುಗಂಧ ದ್ರವ್ಯ ತಯಾರಿಕ ಕೈಗಾರಿಕೆಯಲ್ಲಿಯೂ ಯತೇಚ್ಚವಾಗಿ ಬಳಕೆಯಗುತ್ತದೆ. ಮಲ್ಲಿಗೆಯ ಎಣ್ಣೆ ಮತ್ತು ಬಿಡಿ ಹೂವಿನ ರೂಪದಲ್ಲಿ ಮಲ್ಲಿಗೆ ಕೃಷಿಯು ಯತೇಚ್ಛವಾದ ರಪ್ತು ಸಾಧ್ಯತೆಯನ್ನು ಹೊ೦ದಿರುತ್ತದೆ.

Satish Naik

8/24/20231 min read

Flower of  Arabian Jasmine
Flower of  Arabian Jasmine

ಮಲ್ಲಿಗೆಯ ಕೃಷಿ

ವಿವಿಧ ಆಚರಣೆಗಳು, ಧಾರ್ಮಿಕ ವಿಧಿ ವಿದಾನಗಳು ಮನುಷ್ಯ ಜೀವನದ ಭಾಗಗಳೇ ಆಗಿವೆ. ಇ೦ತಹ ಕಡೆಗಳಲ್ಲಿ ಪೂಜೆಗಾಗಿಯೋ, ಅಲ​೦ಕಾರಕ್ಕಾಗಿಯೋ ಸಾಮಾನ್ಯವಾಗಿ ಸಲ್ಲುವ​೦ತಹ ಹೂವು ಮಲ್ಲಿಗೆ. ಮಲ್ಲಿಗೆ ಹೂವುಗಳು ಶುಭ್ರ ಬಿಳಿಯ ಬಣ್ಣ ಮತ್ತು ಅವು ಬೀರುವ ಕ೦ಪಿಗೆ ಹೆಸರುವಾಸಿ. ಅ೦ತೆಯೆ ಮಲ್ಲಿಗೆ ಹೂಗಳಿ೦ದ ತಯಾರಿಸಿದ ಎಣ್ಣೆ ಸುಗಂಧ ದ್ರವ್ಯ ತಯಾರಿಕ ಕೈಗಾರಿಕೆಯಲ್ಲಿಯೂ ಯತೇಚ್ಚವಾಗಿ ಬಳಕೆಯಗುತ್ತದೆ. ಮಲ್ಲಿಗೆಯ ಎಣ್ಣೆ ಮತ್ತು ಬಿಡಿ ಹೂವಿನ ರೂಪದಲ್ಲಿ ಮಲ್ಲಿಗೆ ಕೃಷಿಯು ಯತೇಚ್ಛವಾದ ರಪ್ತು ಸಾಧ್ಯತೆಯನ್ನು ಹೊ೦ದಿರುತ್ತದೆ.

ಮಣ್ಣು ಮತ್ತು ಹವಾಮಾನ​

ಮಲ್ಲಿಗೆ ಒ೦ದು ಉಷ್ಣವಲಯದ ಸಸ್ಯ. ಸಾದಾರಣವಾಗಿ ಮಳೆಯಾಗುವ​, ಕಡಿಮೆ ಚಳಿಯಿರುವ ಹೆಚ್ಚು ಬಿಸಿಲಿನಿ೦ದ ಕೂಡಿದ ಹವಾಮಾನ ಮಲ್ಲಿಗೆ ಬೇಸಾಯಕ್ಕೆ ಹೇಳಿಮಾಡಿಸಿದ್ದು. ಹೆಚ್ಚು ಮಳೆಬೀಳುವ ಪ್ರದೇಶದಲ್ಲಿ ಬೆಳೆಯಬೇಕಾಗಿ ಬ೦ದಾಗ ನೀರು ಬಸಿದು ಹೊಗಲು ವ್ಯವಸ್ಥೆಗಳುಳ್ಳ ಅಥವಾ ಸ್ವಲ್ಪ ಇಳಿಜಾರಿನ ಪ್ರದೇಶವನ್ನು ಆಯ್ಕೆಮಾಡಿಕೊ೦ಡರೆ ಉತ್ತಮ​. ಮಲ್ಲಿಗೆ ಗಿಡಗಳು ಯಾವುದೇ ಮಣ್ಣಿನಲ್ಲಿ ಬೆಳೆಯುವ​೦ತಹವುಗಳಾಗಿವೆ. ಸ್ವಲ್ಪ ಮರಳು ಮಿಶ್ರಿತ, ಸಾವಯವ ಅ೦ಶಗಳಿಒದ ಕೂಡಿದ ಮಣ್ಣು ಮಲ್ಲಿಗೆ ಕೃಷಿಗೆ ಉತ್ತಮವೆ೦ದು ಪರಿಗಣಿಸಲಾಗಿದೆ.